ಧೋನಿಗೆ ಸೆಂಡ್ ಆಫ್ ಮ್ಯಾಚ್: ಧ್ವನಿಗೂಡಿಸಿದ ಕಿಚ್ಚ ಸುದೀಪ್
ಧೋನಿ ನಿವೃತ್ತಿ ಬಗ್ಗೆ ಮಾತನಾಡಿರುವ ಕಿಚ್ಚ, ನೀವು ಒಬ್ಬ ಉತ್ತಮ ಕ್ರಿಕೆಟಿಗ, ಅತ್ಯುತ್ತಮ ನಾಯಕ. ಆದರೆ ಇದು ಯಾಕೋ ಅರ್ಧಕ್ಕೇ ನಿಂತ ಹಾಗೆ ಕಾಣುತ್ತಿದೆ. ಎಲ್ಲರೂ ಅವರು ಕೊನೆಯದಾಗಿ ಆಡಿದ ಪಂದ್ಯ ನೋಡಿದ್ದೇವೆ. ಆದರೆ ಅದುವೇ ಅವರ ಕೊನೆಯ ಪಂದ್ಯ ಎಂಬುದು ಯಾರಿಗೂ ಗೊತ್ತಿರಲಿಲ್ಲ. ನಾನೂ ಸೇರಿದಂತೆ ಅವರ ಅಪಾರ ಅಭಿಮಾನಿಗಳು ಅವರಿಗೆ ಒಂದು ಅದ್ಭುತ ವಿದಾಯ ಸಿಕ್ಕಿದರೆ ಎಂದು ಆಶಿಸುತ್ತಿದ್ದೇವೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.