ನಿವೃತ್ತಿ ಬೆನ್ನಲ್ಲೇ ಧೋನಿಗೆ ಈ ಟೂರ್ನಿಯಲ್ಲಿ ಆಡಲು ಆಫರ್ ಕೊಟ್ಟ ಶೇನ್ ವಾರ್ನ್

ಭಾನುವಾರ, 16 ಆಗಸ್ಟ್ 2020 (12:46 IST)
ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟಿಗ ಧೋನಿಗೆ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ‘ದಿ ಹಂಡ್ರೆಡ್’ ಎನ್ನುವ ಪ್ರಯೋಗಾತ್ಮಕ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಫರ್ ನೀಡಿದ್ದಾರೆ.


ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯ ಪ್ರಯೋಗಾತ್ಮಕ ಕ್ರಿಕೆಟ್ ಟೂರ್ನಿ ದಿ ಹಂಡ್ರೆಡ್ ನ 2021 ರ ಆವೃತ್ತಿಯ ಟೂರ್ನಿಯಲ್ಲಿ ಆಡುವಂತೆ ಧೋನಿಗೆ ವಾರ್ನ್ ಮನವಿ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳಿವೆ. ವಾರ್ನ್ ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಹೇಳಿದ್ದರೂ ಇಂತಹ ಲೀಗ್ ಪಂದ್ಯಾವಳಿಗಳಲ್ಲಿ ಆಡಬಹುದಾಗಿದೆ. ಹೀಗಾಗಿ ಅವರಿಗೆ ಈ ಟೂರ್ನಿಯಲ್ಲಿ ಆಡಲು ಆಫರ್ ನೀಡಲಾಗಿದೆ. ಆದರೆ ಅದನ್ನು ಅವರು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ