ಈ ವಾರವೂ ಬಿಗ್ ಬಾಸ್ ಗೆ ಬರಲ್ಲ ಕಿಚ್ಚ ಸುದೀಪ್

ಶುಕ್ರವಾರ, 23 ಏಪ್ರಿಲ್ 2021 (10:59 IST)
ಬೆಂಗಳೂರು: ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿರುವ ನಟ ಕಿಚ್ಚ ಸುದೀಪ್ ಈ ವಾರವೂ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.


ನನಗೆ ಇನ್ನೂ ವಿಶ್ರಾಂತಿಯ ಅಗತ್ಯವಿರುವುದರಿಂದ ಈ ವಾರವೂ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಕಳೆದ ವಾರವೂ ಅವರಿಲ್ಲದೇ ವಾರಂತ್ಯದ ಶೋ ನಡೆದಿತ್ತು.

‘ವೇದಿಕೆಯಲ್ಲಿ ಗಂಟೆಗಟ್ಟಲೆ ನಿಂತು ಶೂಟಿಂಗ್ ಮಾಡಿ, ಎಲ್ಲಾ ಸ್ಪರ್ಧಿಗಳಿಗೂ ನ್ಯಾಯ ಒದಗಿಸಲು ನನಗೆ ಈಗ ಸಾಧ‍್ಯವಾಗದು. ವೈದ್ಯರು ಮತ್ತಷ್ಟು ದಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಾಗಿ ಈ ವಾರವೂ ಬಿಗ್ ಬಾಸ್ ನಲ್ಲಿ ಭಾಗವಹಿಸಲ್ಲ. ನನಗೆ ಸಹಾಯವಾಗಲು ಶೂಟಿಂಗ್ ರದ್ದು ಮಾಡಿದ ಕಲರ್ಸ್ ಕನ್ನಡಗೆ ಧನ್ಯವಾದ ಹೇಳುತ್ತೇನೆ. ನನಗಾಗಿ ಪ್ರಾರ್ಥಿಸುವ ಎಲ್ಲರಿಗೂ ಧನ್ಯವಾದಗಳು’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ