ಕಿಚ್ಚ ಸುದೀಪ್ ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಪತ್ನಿ ಪ್ರಿಯಾ ಸುದೀಪ್

ಸೋಮವಾರ, 19 ಏಪ್ರಿಲ್ 2021 (09:26 IST)
ಬೆಂಗಳೂರು: ಅನಾರೋಗ್ಯಕ್ಕೀಡಾಗಿರುವ ಕಿಚ್ಚ ಸುದೀಪ್ ಬಗ್ಗೆ ಆತಂಕಕ್ಕೀಡಾಗಿರುವ ಅಭಿಮಾನಿಗಳಿಗೆ ಪ್ರಿಯಾ ಸುದೀಪ್ ಸಮಾಧಾನಕರ ಮಾಹಿತಿ ಕೊಟ್ಟಿದ್ದಾರೆ.


ಸುದೀಪ್ ತಮಗೆ ಅನಾರೋಗ್ಯವಾಗಿರುವ ಕಾರಣ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ವಾರ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲ್ಲ ಎಂದಿದ್ದರು. ಇದರಿಂದಾಗಿ ಅಭಿಮಾನಿಗಳು ಕಿಚ್ಚನಿಗೆ ಏನಾಗಿರಬಹುದೋ ಎಂಬ ಆತಂಕದಲ್ಲಿದ್ದಾರೆ. ಅತ್ತ ಬಿಗ್ ಬಾಸ್ ಸದಸ್ಯರು ಬೇಸರಗೊಂಡಿದ್ದು, ಕಿಚ್ಚನಿಗಾಗಿ ತಾವೇ ಕೈಯಾರೆ ಲೆಟರ್ ಜೊತೆಗೆ ಆಹಾರ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ.

ಇದೀಗ ಸುದೀಪ್ ಪತ್ನಿ ಪ್ರಿಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಆಹಾರ ತಯಾರಿಸಿಕೊಟ್ಟ ಬಿಗ್ ಬಾಸ್ ಸದಸ್ಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಸುದೀಪ್ ಚೇತರಿಸಿಕೊಳ್ಳುತ್ತಿದ್ದಾರೆ, ಸದ್ಯದಲ್ಲೇ ಬಿಗ್ ಬಾಸ್ ಶೋಗೆ ಮರಳುತ್ತಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ