ತರುಣ್ ಸುಧೀರ್ ಮದುವೆಯಲ್ಲಿ ಸೋನಲ್ ಮಾಂತೆರೊರನ್ನು ಧಾರೆ ಎರೆದುಕೊಟ್ಟ ಅಕ್ಕನ ಗಂಡ ಯಾರು ಗೊತ್ತಾ

Krishnaveni K

ಸೋಮವಾರ, 12 ಆಗಸ್ಟ್ 2024 (12:48 IST)
ಬೆಂಗಳೂರು: ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂತೆರೊ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆಯಲ್ಲಿ ಸೋನಲ್ ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಧಾರೆಯೆರೆದು ಕೊಟ್ಟ ಅಕ್ಕನ ಗಂಡ ಬಾವ ಯಾರು ಗೊತ್ತಾ?

ಸೋನಲ್ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದಾರೆ. ತಾಯಿಯೇ ಅವರನ್ನು ತಂದೆಯ ಸ್ಥಾನದಲ್ಲಿ ನಿಂತು ಬೆಳೆಸಿರುವುದು. ಸೋನಲ್ ಗೆ ಇಬ್ಬರು ಅಕ್ಕಂದಿರಿದ್ದಾರೆ. ಆದರೆ ಅಣ್ಣ-ತಮ್ಮ ಯಾರೂ ಇಲ್ಲ. ಹೀಗಾಗಿ ಸೋನಲ್ ಮದುವೆಯಲ್ಲಿ ತಂದೆ-ತಾಯಿ ಸ್ಥಾನದಲ್ಲಿ ನಿಂತು ಅಕ್ಕ-ಬಾವ ಮದುವೆ ಮಾಡಿಸಿಕೊಟ್ಟಿದ್ದಾರೆ.

ಸೋನಲ್ ಅಕ್ಕನ ಗಂಡ ಬಾವ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾಗುತ್ತಿದ್ದ ಅಗ್ನಿ ಸಾಕ್ಷಿ ಧಾರವಾಹಿಯ ಕಿಶೋರ್ ಪಾತ್ರಧಾರಿಯಾಗಿ ಜನರ ಗಮನ ಸೆಳೆದಿದ್ದ ಕರಾವಳಿ ಮೂಲದ ನಟ ಅಮಿತ್ ರಾವ್. ಸೋನಲ್ ಅಕ್ಕನ ಗಂಡ ಅಮಿತ್ ಎಂದು ಬಹುಶಃ ಹಲವರಿಗೆ ಗೊತ್ತೇ ಇಲ್ಲ.

ನಿನ್ನೆ ಸೋನಲ್ ತಂದೆಯ ಸ್ಥಾನದಲ್ಲಿ ನಿಂತು ಅವರೇ ಕನ್ಯಾದಾನ ಮಾಡಿದ್ದಾರೆ. ಅಮಿತ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮದೇ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋವನ್ನೂ ಹೊಂದಿದ್ದಾರೆ. ಅಲ್ಲದೆ ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯಲ್ಲೂ ವಿಲನ್ ಪಾತ್ರ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ