ನಯನತಾರಾ ಅಭಿನಯದ ‘ಕೋಲಮಾವು ಕೋಕಿಲಾ’ ಚಿತ್ರ ಹಿಂದಿಗೆ ರಿಮೇಕ್

ಶುಕ್ರವಾರ, 4 ಡಿಸೆಂಬರ್ 2020 (13:17 IST)
ಚೆನ್ನೈ : ನೆಲ್ಸನ್ ನಿರ್ದೇಶನದ ನಟಿ ನಯನತಾರಾ ಅಭಿನಯದ ‘ಕೋಲಮಾವು ಕೋಕಿಲಾ’ ಚಿತ್ರ  2018ರಲ್ಲಿ ಬಿಡುಗಡೆಯಾಗಿತ್ತು. ಯಾವುದೇ ನಿರೀಕ್ಷೆಗಳಿಲ್ಲದೇ ಬಿಡುಗಡೆಯಾದ ಈ ಚಿತ್ರ ಅಭಿಮಾನಿಗಳಲ್ಲಿ ಭಾರೀ ಯಶಸ್ಸನ್ನು ಕಂಡಿತ್ತು.

ಇದೀಗ ಈ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುವುದು ಎಂದು ವರದಿಯಾಗಿದ್ದು, ಇದರಲ್ಲಿ ನಟಿ ಶ್ರೀದೇವಿಯವರ ಪುತ್ರಿ ಜಾಹ್ನವಿ ಕಪೂರ್ ಕೋಲಮಾವು ಕೋಕಿಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರೀಕರಣವು ಪಂಜಾಬ್ ನಲ್ಲಿ ಜನವರಿಯಲ್ಲಿ ಪ್ರಾರಂಭವಾಗಲಿದ್ದು, ಈ ಚಿತ್ರಕ್ಕೆ ತಮಿಳಿನಲ್ಲಿ ಸಿಕ್ಕಂತೆ ಹಿಂದಿಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ