ತೆಲುಗಿನಲ್ಲೂ ಕೋಟಿಗೊಬ್ಬ 3 ರಿಲೀಸ್

ಶನಿವಾರ, 27 ಮಾರ್ಚ್ 2021 (09:17 IST)
ಬೆಂಗಳೂರು: ಯುವರತ್ನ ಬಳಿಕ ಕೋಟಿಗೊಬ್ಬ 3 ಸಿನಿಮಾವೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನಿಮಾಗಳಿಗೆ ತೆಲುಗಿನಲ್ಲೂ ಒಳ್ಳೆಯ ಮಾರ್ಕೆಟ್ ಸಿಗುತ್ತಿರುವ ಬೆನ್ನಲ್ಲೇ ಕೋಟಿಗೊಬ್ಬ 3 ಕೂಡಾ ತೆಲುಗಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.


ಏಪ್ರಿಲ್ ಕೊನೆಯ ವಾರದಲ್ಲಿ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ವಿದೇಶದಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ‘ಕೆ3-ಕೋಟಿಕೊಕ್ಕಡು’ ಎಂಬ ಟೈಟಲ್ ನಲ್ಲಿ ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಚಿತ್ರ ಬಿಡುಗಡೆ ಮಾಡಲು ಯೋಜನೆ ನಡೆಸಿತ್ತು. ಆದರೆ ಈಗ ತೆಲುಗಿನಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚಿರುವುದು ಮಾತ್ರವಲ್ಲದೆ, ಕಿಚ್ಚ ಸುದೀಪ್ ಗೆ ತೆಲುಗಿನಲ್ಲಿರುವ ಅಭಿಮಾನಿಗಳನ್ನು ಗಮನಿಸಿ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ