ಸೊಸೆ ಹಾಗೂ ಕೀರ್ತಿಯನ್ನು ದೂರವಿಟ್ಟಿರುವ ಕಾವೇರಿ ಮಗನನ್ನು ತನ್ನ ಕಂಟ್ರೋಲ್‌ನಲ್ಲಿ ಇಡಲು ಒಂದಲ್ಲ ಒಂದು ಕಸರತ್ತು ಮಾಡುತ್ತಿರುತ್ತಾಳೆ. ಇದೀಗ ಸೊಸೆಯನ್ನು ದೂರವಿಟ್ಟ ಕಾವೇರಿ ತನ್ನ ಮಗ ವೈಷ್ಣವ್‌ಗೆ ಇನ್ನೊಂದು ಮದುವೆ ಮಾಡಲು ಹೊರಟಿದ್ದಾಳೆ. ಮಗನ ನಿಶ್ಚಿತಾರ್ಥ ಮಾಡಲು ಜ್ಯೋತಿಷಿಯನ್ನು ಕರೆಸಿ, ಜಾತಕ ತೋರಿಸಿದ್ದಾಳೆ.
ಮಗನ ಜಾತಕ ತೋರಿಸಿದ್ದಾಳೆ. ಈ ವೇಳೆ ಸ್ಕ್ರಿಪ್ಟ್ ರೈಟರ್ ಮಾಡಿದ ಯಡವಟ್ಟಿಗೆ ಡೈರೆಕ್ಟರನ್ನು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಹೆಸರು ವೈಷ್ಣವ್, ಮೇಷ ರಾಶಿ, ಆರಿದ್ರ ನಕ್ಷತ್ರ ಎಂದು ಮಗನ ಜಾತಕನ ತೋರಿಸಿದ್ದಾಳೆ. ಇದನ್ನು ನೋಡಿದ ಪ್ರೇಕ್ಷಕರು ಮೇಷ ರಾಸಿಗೆ ಆರಿದ್ರ ನಕ್ಷತ್ರ ಅಂತಾರಲ್ಲ. ಅಷ್ಟು ಜ್ಞಾನವಿಲ್ಲವೇ? ಮೇಷ ರಾಶಿಗೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ (ಅರ್ಧ ಮಾತ್ರ ), ಬರುತ್ತದೆ
ಈ ಧಾರಾವಾಹಿಯ ನಿರ್ದೇಶಕ ಮಹಾನುಭಾವ ಯಾರೋ? ಮೇಷ ರಾಶಿಗೆ ಆರಿದ್ರ ನಕ್ಷತ್ರ ಅಂತಾರಲ್ಲ. ಅಷ್ಟು ಜ್ಞಾನವಿಲ್ಲವೇ? ಮೇಷ ರಾಶಿಗೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ (ಅರ್ಧ ಮಾತ್ರ ), ಬರುತ್ತದೆ.ಆರಿದ್ರ ನಕ್ಷತ್ರ ಏನಿದ್ದರೂ ಮಿಥುನ ರಾಶಿಗೆ ಬರುತ್ತದೆ. ಧಾರಾವಾಹಿ ಏಕೆ ಮಾಡುತ್ತೀರಿ?