ಮತ್ತೇ ಕಿರುತೆರೆಗೆ ವಾಪಾಸ್ಸಾದ ಬಿಗ್‌ಬಾಸ್ ರನ್ನರ್ ತ್ರಿವಿಕ್ರಮ್, ಯಾವಾ ಸೀರಿಯಲ್ ಗೊತ್ತಾ

Sampriya

ಮಂಗಳವಾರ, 11 ಮಾರ್ಚ್ 2025 (17:20 IST)
Photo Courtesy X
ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 11ರ ರನ್ನರ್‌ ತ್ರಿವಿಕ್ರಮ್ ಇದೀಗ ಹೊಸ ಪ್ರಾಜೆಕ್ಟ್‌ ಮೂಲಕ ಮತ್ತೇ ಕಿರುತೆರೆಗೆ ವಾಪಾಸ್ಸಾಗಿದ್ದಾರೆ.

ಮುದ್ದು ಸೊಸೆ ಎಂಬ ಸೀರಿಯಲ್‌ನಲ್ಲಿ ನಾಯಕನಾಗಿ ಅಭಿನಯಿಸಲು ತ್ರಿವಿಕ್ರಮ್ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದ ಹಾಗೇ ಸಿಸಿಎಲ್‌ನಲ್ಲಿ ತ್ರಿವಿಕ್ರಮ್ ಬ್ಯುಸಿಯಾದರು. ಅದರ ಬೆನ್ನಲ್ಲೇ ಮುದ್ದು ಸೊಸೆ ಸೀರಿಯಲ್ ಪ್ರೋಮೋದಲ್ಲಿ ಮದುವೆ ಗಂಡಿನ ಪಾತ್ರದಲ್ಲಿ ಅಭಿನಯಿಸಿದ್ದರು. ಆದರೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು ಎನ್ನಲಾಗಿತ್ತು.

ಆದರೆ ಇದೀಗ ತ್ರಿವಿಕ್ರಮ್ ಅವರೇ ಈ ಸೀರಿಯಲ್‌ನ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಮೋಡಿ ಮಾಡಿದ್ದ ಪ್ರತಿಮಾ ಅವರು 'ಮುದ್ದು ಸೊಸೆ'ಯಾಗಿ ಕಾಣಿಸಿಕೊಳ್ತಿದ್ದಾರೆ.

ಬಿಗ್‌ಬಾಸ್‌ ಶೋ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ತ್ರಿವಿಕ್ರಮ್ ಅವರು ಇದೀಗ ಕಿರುತೆರೆಗೆ ಮರಳಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ