ವಿಜಯ್ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್

ಶುಕ್ರವಾರ, 15 ಜನವರಿ 2021 (10:20 IST)
ಚೆನ್ನೈ : ಎಲ್ಲರೂ ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಮಾಸ್ಟರ್ ಚಿತ್ರ ಜನವರಿ 13ರಂದು  ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಬಿಡುಗಡೆಯನ್ನು ವಿಜಯ್ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ.

ಮಾಸ್ಟರ್ ಚಿತ್ರವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದಾರೆ. ನಮಕ್ಕಲ್ ಸೇಲಂ ರಸ್ತೆಯಲ್ಲಿರುವ ಖಾಸಗಿ ರಂಗಮಂದಿರದ ಮುಂದೆ ಮುಂಜಾನೆಯಿಂದಲೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿ ರಸ್ತೆಯ ಮಧ್ಯೆ ನೃತ್ಯ ಮಾಡಿದ್ದಾರೆ.

ಇದರಿಂದಾಗಿ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಉಂಟಾದ ಹಿನ್ನಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಕೆಲವು ಅಭಿಮಾನಿಗಳಿಗೆ ಲಾಠಿ ಚಾರ್ಚ್ ಮಾಡಿ ಓಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ