ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ಇಂದು ನಡೆಯಲಿದ್ದು, ಇದರ ಪ್ರೋಮೋವನ್ನು ವಾಹಿನಿ ಹರಿಯಬಿಟ್ಟಿದೆ. ಇದರಲ್ಲಿ ಬಿಗ್ ಬಾಸ್ ನಲ್ಲಿ ನಾನು ನಾನಾಗಿರ್ತೀನಿ ಎಂದು ಬಂದು ಏನು ಮಾಡ್ಬೇಕೂಂತ ಗೊತ್ತಾಗದೇ ಕಳೆದುಹೋಗಿರೋರನ್ನು ಪ್ರತೀ ಸೀಸನ್ ನಲ್ಲಿ ನೋಡಿದ್ದೀನಿ. ನನಗೆ ಬಿಗ್ ಬಾಸ್ ಬೇಕು ಅಂತ ಬಂದು ಬಿಗ್ ಬಾಸ್ ನ್ನೇ ಎಕ್ಸ್ ಪೋಸ್ ಮಾಡ್ತೀನಿ ಎಂದು ಒಬ್ಬರು ನಿರ್ಧಾರ ತೆಗೆದುಕೊಂಡು ನಿಂತಿದ್ದಾರೆ. ತಪ್ಪು ಯಾರು ಮಾಡಿದ್ದರು ಸರಿ ಯಾರು ಮಾಡಬೇಕಿತ್ತು ಎಂದು ಕಿಚ್ಚ ಖಡಕ್ ಆಗಿ ಹೇಳುವ ಪ್ರೋಮೋವನ್ನು ಹರಿಯಬಿಡಲಾಗಿದೆ.
ಇದನ್ನು ನೋಡಿದ ನೆಟ್ಟಿಗರು ಈವತ್ತು ವಾರದ ಕತೆ ಕಿಚ್ಚನ ಜೊತೆ ಅಲ್ಲ, ಲಾಯರ್ ಜಗದೀಶ್ ಜೊತೆ ಎಂದಿದ್ದಾರೆ. ಮತ್ತೆ ಕೆಲವರು ಇಷ್ಟು ದಿನ ನಾನೇ ಎಲ್ಲಾ ಎಂದು ಮೆರೆಯುತ್ತಿದ್ದ ಲಾಯರ್ ಜಗದೀಶ್ ಗೆ ಈವತ್ತು ಕಿಚ್ಚನ ಕೈಯಲ್ಲಿ ಚೆನ್ನಾಗಿ ಮಂಗಳಾರತಿ ಇದೆ ಎಂದು ತಮಾಷೆ ಮಾಡಿದ್ದಾರೆ.