'ಲೆಗಸಿ ಆಫ್ ಲೈಸ್' @ ನೆಟ್ 5

ಮಂಗಳವಾರ, 30 ಮಾರ್ಚ್ 2021 (17:01 IST)
ಬೆಂಗಳೂರು: ಒಟಿಟಿ ಪ್ಲಾಟ್ ಫಾರ್ಮ್ ನೆಟ್ 5 ಅನ್ನು ಹೊಂದಿರುವ ಬೆಂಗಳೂರು ಮೂಲದ ಪ್ರೈಮ್ ಒರಿಜಿನಲ್  ಪ್ರೈವೇಟ್ ಲಿಮಿಟೆಡ್, ತಮ್ಮ ಮೊದಲ ಚಲನಚಿತ್ರ “ಲೆಗಸಿ ಆಫ್ ಲೈಸ್’ ಅನ್ನು ಏಪ್ರಿಲ್ 2ರಂದು ಭಾರತದಾದ್ಯಂತ ಇಂಗ್ಲಿಷ್, ಹಿಂದಿ, ತಮಿಳು ತೆಲುಗು ಭಾಷೆಯ ಮೂಲಕ ವಿತರಿಸಲು ಸಜ್ಜಾಗಿದೆ. ಈ ಚಿತ್ರದಲ್ಲಿ ನಟ ಸ್ಕಾಟ್ ಆಡ್ಕಿನ್ಸ್ ಅವರು ನಟಿಸಿದ್ದಾರೆ.

ಪ್ರೈಮ್ ಒರಿಜಿನಲ್ಸ್ ತಮ್ಮದೇ ಆದ ಒಟಿಟಿ  ಪ್ಲಾಟ್ ಫಾರ್ಮ್ ನೆಟ್ 5 ಗಳನ್ನು ಹೊಂದಿದ ಕಂಪೆನಿಯಾಗಿದ್ದರೂ, ತಮ್ಮ ಕೆಲವು ಆ್ಯಕ್ಷನ್, ಬ್ಲಾಕ್ ಬಾಸ್ಟರ್ ಚಲನಚಿತ್ರಗಳನ್ನು ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ನಂತರ ತಮ್ಮ ಪ್ಲಾಟ್ ಫಾರ್ಮ್ ನಲ್ಲಿ ತೋರಿಸಲು ಬಯಸುವ ಒಂದು ಕಂಪೆನಿಯಾಗಿದೆ.

ಪ್ರೈಮ್ ಒರಿಜಿನಲ್ಸ್ ತಮ್ಮ ‘ಲೆಗೆಸಿ ಆಫ್  ಲೈಸ್’ ಚಿತ್ರವನ್ನು ಏಪ್ರಿಲ್ 2,2021ರಂದು ಬಿಡುಗಡೆ ಮಾಡುತ್ತಿದ್ದು, ಇದು ಇಂಗ್ಲಿಷ್, ಹಿಂದಿ, ತೆಲುಗು, ಮತ್ತು ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆ.
ಬಿಡುಗಡೆಯ ದಿನಾಂಕ: ಏಪ್ರಿಲ್ 2,2021
ಯೂಟ್ಯೂಬ್ ಟ್ರೈಲರ್ ಲಿಂಕ್:
https://www.youtube.com/watch?v=pPad7MVbtM8&feature=youtu.be&ab_channel=Net5

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ