ಆದ್ರೆ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಮೊದಲಿನಿಂದ ಸಿನ್ಮಾಗೆ ಸಾಥ್ ಕೊಡ್ತಿರೋದ್ರಿಂದ ಸಿನ್ಮಾ ನೋಡಿದ ಕಿಚ್ಚ ಏನ್ ಹೇಳ್ತಾರೆ ಅನ್ನೂ ಕುತೂಹಲವಿತ್ತು.ಆದ್ರೆ ಅದಕ್ಕೀಗ ಉತ್ತರ ಸಿಕ್ಕಾಗಿದೆ. ಹೌದು ಚಿತ್ರತಂಡ ಆಯೋಜಿಸಿದ್ದ ಸೆಲೆಬ್ರೆಟಿ ಶೋ ನಲ್ಲಿ ಲವ್ ಮಾಕ್ಟೈಲ್ ಸವಿದ ಕಿಚ್ಚ ಫುಲ್ ಖುಷ್ ಆಗಿದ್ದು ಮೊದಲ ನಿರ್ದೇಶನದೊಂದಿಗೆ ಡಾರ್ಲಿಂಗ್ ಕೃಷ್ಣ ಕಥೆಯನ್ನ ನೆರೇಟ್ ಮಾಡಿದ ರೀತಿಗೆ ಫಿದಾ ಆಗಿದ್ದಾರೆ. ಕಥೆಯನ್ನು ಇಷ್ಟ ಪಟ್ಟಿರೋ ಕಿಚ್ಚ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿ ಸಿನೆಮಾ ಕುರಿತಾದ ತಮ್ಮ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಬ್ಯೂಟಿಫುಲ್ ಲವ್ ಸ್ಟೋರಿನ ಹೊತ್ತು ತೆರೆಮೇಲೆ ಅಪ್ಪಳಿಸಿರೋ 'ಲವ್ ಮಾಕ್ಟೈಲ್' ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗಾರಾಜ್ ನಾಯಕ-ನಾಯಕಿ ಯಾಗೋದ್ರ ಜೊತೆಗೆ ಬಂಡವಾಳ ಹಾಕಿ,ಡಾರ್ಲಿಂಗ್ ಕೃಷ್ಣ ಈ ಮೂಲಕ ನಿರ್ದೇಶಕ, ನಿರ್ಮಾಪಕ ಹಾಗು ನಟ ನಾಗಿಯೂ ಬಡ್ತಿ ಪಡೆದಿದ್ದಾರೆ.ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಕಿಕ್ ಕೊಟ್ಟಿದ್ದು,ಸಿನೆಮಾ ನೋಡಿದ ಪ್ರೇಕ್ಷಕ ರ ಬಾಯಲ್ಲಿ ವಾವ್..! ವಾಟ್ ಎ ಮೂವಿ ಅನ್ನೋ ಖುಷಿಯೇ ತುಂಬಿದೆ. ಸಧ್ಯ ಈ ವೀಕೆಂಡ್ ಚಿತ್ರದ ಗುಡ್ ರಿವ್ಯೂವ್ಸ್ ಕೇಳ್ತಾ ಸಂಭ್ರಮಿಸ್ತಿರೋ ಲವ್ ಮಾಕ್ಟೈಲ್ ಸಂತೋಷದ ಕಿಕ್ ಸ್ಟಾರ್ಟ್ ನಲ್ಲಿದೆ.