ನಿರ್ದೇಶಕ ಶಂಕರ್ ಗೆ ಮತ್ತೆ ಶಾಕ್ ನೀಡಿದ ಮದ್ರಾಸ್ ಹೈಕೋರ್ಟ್

ಶುಕ್ರವಾರ, 16 ಏಪ್ರಿಲ್ 2021 (16:39 IST)
ಚೆನ್ನೈ : ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರದ ವಿಚಾರಕ್ಕೆ ಶಂಬಂಧಿಸಿದಂತೆ  ನಿರ್ದೇಶಕ ಶಂಕರ್ ಅವರಿಗೆ ಮದ್ರಾಸ್ ಹೈಕೋರ್ಟ್ ಮತ್ತೆ ಶಾಕ್ ನೀಡಿದೆ.

1996ರಲ್ಲಿ ಬಿಡುಗಡೆಯಾದ ಇಂಡಿಯನ್ ಚಿತ್ರದ ಮುಂದುವರಿದ ಭಾಗವನ್ನು ಮಾಡಲು ನಿರ್ದೇಶಕ ಶಂಕರ್ ಲೈಕಾ ಪ್ರೊಡಕ್ಷನ್ ಹೌಸ್ ನೊಂದಿಗೆ ಕೈಜೋಡಿಸಿದ್ದಾರೆ. ಆದರೆ ಈ ಚಿತ್ರಕ್ಕೆ ಎದುರಾದ ಕೆಲವು ಸಮಸ್ಯೆಗಳಿಂದ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ. ಹೀಗಾಗಿ ನಿರ್ದೇಶಕ ಶಂಕರ್ ಅವರು ಮುಂದಿನ ಚಿತ್ರಕ್ಕೆ ಕೈಹಾಕಿದ್ದಾರೆ.

ಈ ಬಗ್ಗೆ ಲೈಕಾ ಪ್ರೊಡಕ್ಷನ್ ಹೌಸ್ ಇಂಡಿಯನ್ 2 ಪ್ರಾಜೆಕ್ಟ್ ಮುಗಿಸದೆ ಶಂಕರ್ ಮತ್ತೊಂದು ಪ್ರಾಜೆಕ್ಟ್ ಹೋಗುವುದನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದರು. ಆದರೆ ಮೊದಲು ಮನವಿಯನ್ನು ನಿರಾಕರಿಸಿದ ಕೋರ್ಟ್ ಈಗ ಲೈಕಾ ಪ್ರೊಡಕ್ಷನ್ ಹೌಸ್ ಗೆ  ಹೊಸ ಅರ್ಜಿಯೊಂದಿಗೆ ಶಂಕರ್ ಇತರ ಚಲನಚಿತ್ರಗಳನ್ನು ನಿರ್ದೇಶಿಸುವುದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅನುಮತಿ ನೀಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ