ವಿಕ್ರಮ್ ನಟನೆಯ ‘ಅನ್ನಿಯಾನ್’ ಚಿತ್ರ ಹಿಂದಿಗೆ ರಿಮೇಕ್

ಶುಕ್ರವಾರ, 16 ಏಪ್ರಿಲ್ 2021 (10:14 IST)
ಚೆನ್ನೈ : 2005ರಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸನ್ನು ಕಂಡಂತಹ ವಿಕ್ರಮ್ ನಟನೆಯ ‘ಅನ್ನಿಯಾನ್’ ಚಿತ್ರವನ್ನು ಇದೀಗ ಹಿಂದಿಯಲ್ಲಿ ರಿಮೇಕ್ ಮಾಡಲು ಹೊರಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಿರ್ದೇಶಕ ಶಂಕರ್ ಅವರು 16 ವರ್ಷಗಳ ಬಳಿಕ ಅದನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಹೊರಟಿದ್ದಾರೆ.  ಹಿಂದಿಯಲ್ಲಿ ಸೂಪರ್ ಸ್ಟಾರ್ ನಟ ರಣವೀರ್ ಸಿಂಗ್ ಅವರು ವಿಕ್ರಮ್ ಅವರ ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ. ಪಿಇಎನ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಜಯಂತಿ ಲಾಲ್ ಗಡಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಚಿತ್ರದಲ್ಲಿ ವಿಕ್ರಮ್ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆಂದು ರಣವೀರ್ ಸಿಂಗ್ ಹೊಗಳಿದ್ದಾರೆ. ಮತ್ತು ಈ ಚಿತ್ರ ಈ ಬಾರಿಯೂ ಕೂಡ ನಿರೀಕ್ಷಿತ ಮಟ್ಟಕ್ಕೆ ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ