ಈ ಕಾರಣಕ್ಕೆ ವಿಜಯದೇವರಕೊಂಡರನ್ನು ಟ್ರೋಲ್ ಮಾಡಿದ ಮಹೇಶ್ ಬಾಬು ಅಭಿಮಾನಿಗಳು

ಗುರುವಾರ, 13 ಆಗಸ್ಟ್ 2020 (11:02 IST)
ಹೈದರಾಬಾದ್ : ಟಾಲಿವುಡ್ ‍ಫ್ರಿನ್ಸ್ ಮಹೇಶ್ ಬಾಬು ಅವರ  ಅಭಿಮಾನಿಗಳು ತೆಲುಗು ನಟ ವಿಜಯದೇವರಕೊಂಡ ಅವರನ್ನು ಟ್ರೋಲ್ ಮಾಡಿದ್ದಾರೆ.

ಮಹೇಶ್ ಬಾಬು ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕೊರೊನಾ ಹಿನ್ನಲೆಯಲ್ಲಿ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ  ನಟನಿಗೆ ವಿಶ್ ಮಾಡಿದ್ದರು. ಆದರೆ ನಟ ವಿಜಯದೇವರಕೊಂಡ ಮಾತ್ರ ಮಹೇಶ್ ಬಾಬು ಗೆ ವಿಶ್ ಮಾಡಿರಲಿಲ್ಲ

ಇದರಿಂದ ಕೋಪಗೊಂಡ ಮಹೇಶ್ ಬಾಬು ಅಭಿಮಾನಿಗಳು, ನಾನು ಮಹೇಶ್ ಬಾಬು ಫ್ಯಾನ್ ಎಂದು ಹೇಳಿಕೊಂಡಿದ್ದ ವಿಜಯದೇವರಕೊಂಡ ಬರ್ತಡೇಗೆ ವಿಶ್ ಮಾಡಿಲ್ಲ, ಹಿಂದಿ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ