ಸತ್ಯನಾರಾಯಣ ಪೂಜೆ ನೇರವೇರಿಸಿದ ನವದಂಪತಿಗಳು

ಬುಧವಾರ, 12 ಆಗಸ್ಟ್ 2020 (10:54 IST)
ಹೈದರಾಬಾದ್ : ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಯಾದ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಸತ್ಯನಾರಾಯಣ ಪೂಜೆ ನೇರವೇರಿಸಿದ್ದಾರೆ.

ನಟ ರಾಣಾ ದಗ್ಗುಬಾಟಿ ತಮ್ಮ ಪತ್ನಿ ಮಿಹಿಕಾ ಜೊತೆ ಹೈದರಾಬಾದಿನ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ನಡೆಸಿದ್ದಾರೆ. ಆ ವೇಳೆ ಮಿಹಿಕಾ ಹಸಿರು ಮತ್ತು ಗೋಲ್ಡನ್ ಹ್ಯಾಂಡ್ ಲೂಮ್ ಸೀರೆ, ಕೆಂಪು ಬಣ್ಣದ ದುಪ್ಪಟ್ಟಾ ಧರಿಸಿದ್ದು, ನಟ ರಾಣಾ ದಗ್ಗುಬಾಟಿ ಬಿಳಿ ಬಣ್ಣದ ಕಾಟನ್ ಕುರ್ತಾ ಪಂಚೆ ಧರಿಸಿದ್ದಾರೆ.

ನವದಂಪತಿಗಳಿಬ್ಬರು ಜೊತೆಯಾಗಿ ಕುಳಿತು ಸತ್ಯನಾರಾಯಣ ಪೂಜೆ ಮಾಡಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ