ದಳಪತಿ ವಿಜಯ್-ರಶ್ಮಿಕಾ ಸಿನಿಮಾದಲ್ಲಿ ಮಹೇಶ್ ಬಾಬು ಪಾತ್ರ?

ಶನಿವಾರ, 18 ಜೂನ್ 2022 (08:40 IST)
ಹೈದರಾಬಾದ್: ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ‘ದಳಪತಿ 66’ ಸಿನಿಮಾದಲ್ಲಿ ಮಹೇಶ್ ಬಾಬು ಕೂಡಾ ಪಾತ್ರ ಮಾಡಲಿದ್ದಾರಾ?

ಹೀಗೊಂದು ಸುದ್ದಿ ಈಗ ಹರಿದಾಡುತ್ತಿದೆ. ವಿಜಯ್-ರಶ್ಮಿಕಾ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ಅತಿಥಿ ಪಾತ್ರವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ.

ವಂಶಿ ಪಡಪ್ಪಳ್ಳಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ಇದೇ ನಿರ್ದೇಶಕರು ಮಹೇಶ್ ಜೊತೆಗೆ ಮಹರ್ಷಿ ಎಂಬ ಸೂಪರ್ ಹಿಟ್ ಸಿನಿಮಾ ಮಾಡಿದ್ದರು. ಹೀಗಾಗಿ ಅದೇ ಸ್ನೇಹದಿಂದ ದಳಪತಿ 66 ಸಿನಿಮಾದ ವಿಶೇಷ ಪಾತ್ರವೊಂದಕ್ಕೆ ಮಹೇಶ್ ಬಾಬುರನ್ನು ಕರೆತರಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ