ಗರ್ಲ್ ಫ್ರೆಂಡ್ ಗೆ ಬೇರೆ ಅಫೇರ್ ಇರುವ ಅನುಮಾನ: ಪ್ರಿಯಕರ ಮಾಡಿದ್ದೇನು?

ಗುರುವಾರ, 7 ಜುಲೈ 2022 (08:50 IST)
ವೆಲ್ಲೋರ್: ತನ್ನ ಪ್ರೇಯಸಿ ಇನ್ನೊಬ್ಬನ ಜೊತೆ ಲವ್ವಿ ಡವ್ವಿ ನಡೆಸುತ್ತಿದ್ದಾಳೆಂಬ ಅನುಮಾನದಲ್ಲಿ ಪ್ರಿಯಕರ ಆಕೆಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ತೀರ್ಮಾನಿಸಿ ಮನೆಯವರ ಒಪ್ಪಿಗೆಯನ್ನೂ ಕೇಳಿದ್ದರು. ಆದರೆ ಇತ್ತೀಚೆಗೆ ತನ್ನ ಹುಡುಗಿ ಇನ್ನೊಬ್ಬನೊಂದಿಗೆ ಪ್ರೇಮ ಸಂಬಂಧವಿಟ್ಟುಕೊಂಡಿದ್ದಾಳೆಂದು ಆರೋಪಿಗೆ ಅನುಮಾನವಿತ್ತು.

ಇದೇ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಪ್ರಿಯಕರ ಪ್ರಿಯತಮೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಯುವತಿ ಗಾಯಗೊಂಡಿದ್ದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇತ್ತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ