ಚಿತ್ರ ವಿಮರ್ಶೆ: ಮನೆ ನಂ.13 ಎಂಬ ಹಾರರ್ ಜರ್ನಿ

ಶುಕ್ರವಾರ, 27 ನವೆಂಬರ್ 2020 (09:03 IST)
ಬೆಂಗಳೂರು: ದಿಯಾ, ಕರ್ವ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಲ್ಲಿ ಹೊಸ ಭರವಸೆ ಹುಟ್ಟಿಸಿದ್ದ ಅದೇ ಚಿತ್ರತಂಡ ನಿರ್ಮಿಸಿರುವ ಸಿನಿಮಾ ಮನೆ ನಂ.13. ಇದೊಂದು ಪಕ್ಕಾ ಹಾರರ್ ಸಿನಿಮಾ.

 
ಆರಂಭದಿಂದಲೂ ಕೊನೆಯವರೆಗೂ ಗುಂಡಿಗೆ ಗಟ್ಟಿ ಮಾಡಿಕೊಂಡೇ ನೋಡಬೇಕಾದ ಸಿನಿಮಾ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ನಾಲ್ಕೈದು ಮಂದಿ ಸ್ನೇಹಿತರ ಗುಂಪು ಹೊಸ ಮನೆಯೊಂದಕ್ಕೆ ಶಿಫ್ಟ್ ಆಗುತ್ತದೆ. ಮೊದಲ ದಿನದಿಂದಲೂ ಅಲ್ಲಿ ಭೂತದ ಕಾಟ. ಆ ಮನೆಯಲ್ಲಿ ಏನೋ ಸಮಸ್ಯೆಯಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಅವರಲ್ಲಿ ಒಬ್ಬೊಬ್ಬರಾಗಿ ಸಾಯುತ್ತಾರೆ. ಇದಕ್ಕೆಲ್ಲಾ ನಿಜವಾದ ಕಾರಣವೇನು ಎಂಬುದೇ ಈ ಸಿನಿಮಾದ ಕತೆ.
 
ಎಲ್ಲಾ ಹಾರರ್ ಸಿನಿಮಾಗಳಲ್ಲಿರುವಂತೇ ಭಯಹುಟ್ಟಿಸುವ ಅನೇಕ ಅಂಶಗಳಿವೆ. ಆದರೆ ಹಾರರ್ ಸಿನಿಮಾಗಳನ್ನು ನೋಡಿ ಅಭ್ಯಾಸವಾದವರಿಗೆ ಇದರಲ್ಲಿ ವಿಶೇಷ ಏನೂ ಕಾಣಿಸದು. ಆದರೂ ಒಮ್ಮೆ ನೋಡಲು ಅಡ್ಡಿಯಿಲ್ಲದ ಸಿನಿಮಾ. ರಮಣ, ವರ್ಷ, ಐಶ್ವರ್ಯ ಗೌಡ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶನ ವಿವಿ ಕಥಿರೇಷನ್ ಅವರದ್ದು. ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ