ಈಗೀಗ ಸಿನಿಮಾದಲ್ಲಿ ಎಲ್ಲವೂ ಕತ್ತಲೆ: ಮ್ಯಾಕ್ಸ್ ಟೀಸರ್ ನೋಡಿದ ನೆಟ್ಟಿಗರ ಕಾಮೆಂಟ್ ಹೀಗಿದೆ
ಟೀಸರ್ ನೋಡಿದರೆ ಈ ಸಿನಿಮಾ ಪಕ್ಕಾ ಮಾಸ್ ಮಸಾಲ ಎನ್ನುವುದು ಖಚಿತವಾಗುತ್ತದೆ. ಕತ್ತಿ ಹಿಡಿದು ಕಿಚ್ಚ ಸುದೀಪ್ ಒಂದೇ ಕ್ಷಣಕ್ಕೆ ಹಲವು ಎದುರಾಳಿಗಳನ್ನು ಕೊಚ್ಚಿ ಹಾಕುತ್ತಿರುವ ದೃಶ್ಯಗಳಿವೆ. ಕೆಜಿಎಫ್, ಸಲಾರ್ ನಂತೇ ಪಕ್ಕಾ ಮಾಸ್ ಅಂಶಗಳೆಲ್ಲವೂ ಇರುವ ಸಿನಿಮಾ ಇದು ಎಂದು ಊಹಿಸಬಹುದು.
ಈ ಟೀಸರ್ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಟೀಸರ್ ನಲ್ಲಿ ಶತ್ರುಗಳನ್ನು ಹೊಡೆದುರುಳಿಸಿದ ಬಳಿಕ ಕಿಚ್ಚ ಹಾಕೋ ಸ್ಟೆಪ್ ಗೆ ಜನ ಫಿದಾ ಆಗಿದ್ದಾರೆ. ಕಿಚ್ಚ ಸುದೀಪ್ ಮ್ಯಾನರಿಸಂ ನೋಡುವುದೇ ಚಂದ ಎನ್ನುತ್ತಿದ್ದಾರೆ.
ಆದರೆ ಕೆಲವರು ಯಾಕೋ ಇತ್ತೀಚೆಗೆ ಬರುವ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಕತ್ತಲಲ್ಲೇ ಇರುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸುದೀಪ್ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಈಗ ಸುದೀಪ್ ಸಿನಿಮಾ ಬಹಳ ಸಮಯದ ನಂತರ ಬರುತ್ತಿದ್ದು ಈ ಟೀಸರ್ ಗಾಗಿ ಫ್ಯಾನ್ಸ್ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದರು. ಜನರನ್ನು ಮೆಚ್ಚಿಸುವ ಎಲ್ಲಾ ಅಂಶಗಳೂ ಈ ಟೀಸರ್ ನಲ್ಲಿದೆ.