ಯಶ್-ರಾಧಿಕಾ ಪಂಡಿತ್ ಮುದ್ದಾದ ಮಗಳ ಫೋಟೋ ನೋಡಿ ಹುಚ್ಚೆದ್ದ ನೆಟ್ಟಿಗರು

ಮಂಗಳವಾರ, 7 ಮೇ 2019 (13:52 IST)
ಬೆಂಗಳೂರು: ಸ್ಯಾಂಡಲ್ ವುಡ್‍ ಕ್ವೀನ್ ರಾಧಿಕಾ ಪಂಡಿತ್-ಯಶ್ ಜೋಡಿಯ ಮುದ್ದಾದ ಮಗಳ ಫೋಟೋ ಬಹಿರಂಗವಾಗಿದ್ದು, ಫೋಟೋ ನೋಡಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಲೈಕ್ಸ್, ಕಾಮೆಂಟ್ ಮಾಡಿದ್ದಾರೆ.

 

ಅಕ್ಷಯ ತೃತೀಯ ದಿನ ನಮ್ಮ ಮನೆಯ ಮುದ್ದು ಬಂಗಾರದ ಫೋಟೋ ಪ್ರಕಟಿಸುವುದಾಗಿ ಈ ಮೊದಲೇ ರಾಧಿಕಾ ಘೋಷಿಸಿದ್ದರು. ಅದರಂತೇ ಇಂದು, ಯಶ್ ಮತ್ತು ರಾಧಿಕಾ ತಮ್ಮ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋ ಪ್ರಕಟಿಸಿದ್ದರು.

ಸದ್ಯಕ್ಕೆ ಮಗುವಿಗೆ ಹೆಸರು ಇಟ್ಟಿಲ್ಲ. ಇವಳನ್ನು ‘ಬೇಬಿ ವೈಆರ್’ ಎಂದು ಕೂಗಬಹುದು ಎಂದು ರಾಧಿಕಾ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ