ಚಿರು ಸರ್ಜಾ ಬರ್ತ್ ಡೇಗೆ ಭಾವುಕ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್

ಮಂಗಳವಾರ, 17 ಅಕ್ಟೋಬರ್ 2023 (16:49 IST)
ಬೆಂಗಳೂರು: ಅಕಾಲಿಕವಾಗಿ ನಮ್ಮನ್ನಗಲಿದ್ದ ನಟ ಚಿರಂಜೀವಿ ಸರ್ಜಾಗೆ ಇಂದು ಜನ್ಮದಿನ. ಅವರ ಜನ್ಮಜಯಂತಿಯಂದು ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಗಂಡನ ಜೊತೆಗಿರುವ ಆತ್ಮೀಯ ಕ್ಷಣದ ಫೋಟೋವೊಂದನ್ನು ಹಂಚಿಕೊಂಡಿರುವ ಮೇಘನಾ ‘ಹ್ಯಾಪೀ ಬರ್ತ್ ಡೇ ಹಸ್ಬೆಂಡ್’ ಎಂದು ಸ್ವೀಟ್ ಆಗಿ ವಿಶ್ ಮಾಡಿದ್ದಾರೆ. ಇನ್ನು, ಸಹೋದರ ಧ್ರುವ ಸರ್ಜಾ ಕೂಡಾ ಅಣ್ಣನ ಜನ್ಮದಿನಕ್ಕೆ ಚಿರು ಜೊತೆಗಿರುವ ಫೋಟೋ ಹಾಕಿಕೊಂಡು ಶುಭ ಕೋರಿದ್ದಾರೆ.

ಚಿರು ಸರ್ಜಾ ಅಗಲಿ ಮೂರು ವರ್ಷವಾಗಿದೆ. ಇತ್ತೀಚೆಗಷ್ಟೇ ಚಿರು ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಂಡ ಬಿಡುಗಡೆಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ