ಭಾವೀ ಪತಿಯ ಪರಿಚಯಿಸಿದ ಸೀತಾರಾಮ ನಟಿ ಮೇಘನಾ ಶಂಕರಪ್ಪ

Krishnaveni K

ಶನಿವಾರ, 7 ಡಿಸೆಂಬರ್ 2024 (10:41 IST)
ಬೆಂಗಳೂರು: ಸೀತಾರಾಮ ಧಾರವಾಹಿಯಲ್ಲಿ ಪ್ರಿಯಾ ಎನ್ನುವ ಬಬ್ಲಿ ಕ್ಯಾರೆಕ್ಟರ್ ಮಾಡುತ್ತಿರುವ ನಟಿ ಮೇಘನಾ ಶಂಕರಪ್ಪ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವೀ ಪತಿಯನ್ನು ಪರಿಚಯಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿಯಲ್ಲಿ ಮೇಘನಾ ನಾಯಕಿಯ ಗೆಳತಿ ಪ್ರಿಯಾ ಪಾತ್ರ ಮಾಡುತ್ತಿದ್ದಾರೆ. ಒಂಥರಾ ಬಬ್ಲಿ, ಕಾಮಿಡಿ ಮಿಕ್ಸ್ ಆಗಿರುವ ಪ್ರಿಯಾ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ಇದರ ನಡುವೆ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲೂ ಭಾಗಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕೆಲವು ಸಮಯದ ಹಿಂದೆ ತಮ್ಮ ರಿಯಲ್ ಲೈಫ್ ಲವ್ ಸಿಕ್ಕಿರುವುದಾಗಿ ಸುಳಿವು ನೀಡಿದ್ದರು. ಕೇವಲ ಕೈ ಹಿಡಿದಿರುವ ಫೋಟೋ ಪ್ರಕಟಿಸಿ ತಮ್ಮ ಹುಡುಗನಿಗೆ ಬರ್ತ್ ಡೇ ವಿಶ್ ಮಾಡಿದ್ದರು. ಆದರೆ ಈಗ ತಮ್ಮ ಹುಡುಗನ ಜೊತೆಗಿರುವ ವಿಡಿಯೋ ಹಂಚಿಕೊಂಡಿದ್ದು ಎಂಗೇಜ್ ಆಗಿರುವುದಾಗಿ ಹೇಳಿದ್ದಾರೆ.

ಜಯಂತ್ ಎಂಬವರನ್ನು ಮೇಘನಾ ಮದುವೆಯಾಗುತ್ತಿದ್ದಾರೆ. ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಾಗಿ ಮೇಘನಾ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ