ಐವರು ಕಾಮುಕರಿಂದ ಅಪ್ರಾಪ್ತೆಯ ಮೇಲೆ ಮಾನಭಂಗ

ಮಂಗಳವಾರ, 31 ಆಗಸ್ಟ್ 2021 (09:21 IST)
ಜೈಪುರ: 16 ವರ್ಷದ ಅಪ್ರಾಪ್ತೆಯ ಮೇಲೆ ಐವರು ಕಾಮುಕರು ಗ್ಯಾಂಗ್ ರೇಪ್ ಮಾಡಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.


ಈ ಸಂಬಂಧ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು 20 ವರ್ಷದ ಯುವಕ ಮತ್ತು ಓರ್ವ ಅಪ್ರಾಪ್ತ ಯುವಕನನ್ನು ಬಂಧಿಸಿದ್ದಾರೆ.

ಘಟನೆ ಬಗ್ಗೆ ಯಾರಿಗೂ ಬಾಯಿಬಿಡದಂತೆ ಆರೋಪಿಗಳು ಬೆದರಿಕೆ ಹಾಕಿದ್ದರು. ಆದರೆ ಮಾನಸಿಕವಾಗಿ ಜರ್ಜರಿತಳಾಗಿದ್ದ ಯುವತಿಯನ್ನು ಮನೆಯವರು ಪ್ರಶ್ನಿಸಿದಾಗ ಆಕೆ ನಿಜ ವಿಚಾರ ಬಾಯ್ಬಿಟ್ಟಿದ್ದಾಳೆ. ಅದರಂತೆ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ