ಉಪೇಂದ್ರ ನಟನೆಯ 'ಎ' ಸಿನಿಮಾ ರೀ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Sampriya

ಸೋಮವಾರ, 13 ಮೇ 2024 (17:58 IST)
Photo Courtesy X
ಬೆಂಗಳೂರು: 1998ರಲ್ಲಿ ಕೋಟಿ ಬಜೆಟ್‌ನಲ್ಲಿ ರಿಲೀಸ್ ಆಗಿ ಹೊಸ ಟ್ರೆಂಡ್ ಸೆಟ್ ಮಾಡಿ, ಬಹು ಕೋಟಿ ಗಳಿಸಿದ  'ಎ' ಸಿನಿಮಾ ಇದೀಗ ಮರು ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ.  

ಇದೀಗ ಮತ್ತೇ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಎ'  ಸಿನಿಮಾ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.  ಈ ಸಿನಿಮಾದಲ್ಲಿ ಉಪೇಂದ್ರ ಅವರು ಮೂರು ಜನ ಹೀರೋಯಿನ್‌ಗಳ ಜತೆ ಡ್ಯುಯೇಟ್ ಹಾಡಿದ್ದರು. ಹೊಸ ಟ್ರೆಂಡ್ ಸೆಟ್ ಮಾಡಿದ ಈ ಸಿನಿಮಾ ಇದೇ 17ರಂದು ಮರು ಬಿಡುಗಡೆಯಾಗಲಿದೆ.

ಅಂದಹಾಗೆ, ಉಪೇಂದ್ರ ನಟಿಸಿ, ನಿರ್ದೇಶಿಸಿದ 'ಎ' ಸಿನಿಮಾದಲ್ಲಿ ಪ್ರೇಮ, ರವೀನಾ ಟಂಡನ್‌, ದಾಮಿನಿ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರಕ್ಕೆ ಗುರುಕಿರಣ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಉಪೇಂದ್ರ ಅವರ 'ಎ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ್ನು ಸೃಷ್ಟಿಸಿ, ಸೂಪರ್ ಕಲೆಕ್ಷನ್ ಮಾಡಿತ್ತು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ