ಎರಡನೇ ಮದುವೆಗೆ ರೆಡಿಯಾದ ನಾಗಚೈತನ್ಯ

ಭಾನುವಾರ, 17 ಸೆಪ್ಟಂಬರ್ 2023 (17:04 IST)
ಹೈದರಾಬಾದ್: ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ನಟ ನಾಗಚೈತನ್ಯ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಸಮಂತಾರಿಂದ ದೂರವಾದ ಬಳಿಕ ನಾಗಚೈತನ್ಯ ಸಿನಿ ಜೀವನದಲ್ಲಿ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಆದರೆ ವೈಯಕ್ತಿಕ ಜೀವನದಲ್ಲಿ ನಟಿಯೊಬ್ಬರ ಜೊತೆ ಅವರ ಹೆಸರು ಕೇಳಿಬಂದಿತ್ತು. ಆದರೆ ಇದೆಲ್ಲವೂ ಊಹಾಪೋಹ ಎಂದು ಸ್ಪಷ್ಟನೆ ಬಂದಿತ್ತು.

ಆದರೆ ಈಗ ನಾಗ ಮನೆಯವರೇ ನೋಡಿ ನಿರ್ಧರಿಸಿರುವ ಉದ್ಯಮಿ ಪುತ್ರಿಯೊಬ್ಬರ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿಯನ್ನು ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ