ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ನಯನತಾರಾ-ವಿಘ್ನೇಶ್ ಗೆ ಕಾನೂನು ಸಂಕಷ್ಟ

ಮಂಗಳವಾರ, 11 ಅಕ್ಟೋಬರ್ 2022 (09:40 IST)
WD
ಚೆನ್ನೈ: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಟಾಲಿವುಡ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಕೆಲವೊಂದು ನಿಯಮಗಳಿವೆ. ಆದರೆ ನಯನತಾರಾ ವಿಘ‍್ನೇಶ್ ದಂಪತಿ ಈ ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ವೈದ್ಯಕೀಯ ಸೇವೆಗಳ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.

ಬಾಡಿಗೆ ತಾಯಿಯಾಗುವ ಮಹಿಳೆಯ ವಯಸ್ಸು 21-35 ರೊಳಗಿರಬೇಕು. ಆಕೆ ಹಣಕ್ಕಾಗಿ ಈ ಕೆಲಸ ಮಾಡುವಂತಿಲ್ಲ. ವಾಣಿಜ್ಯ ಉದ್ದೇಶಕ್ಕೆ ಈ ಕೆಲಸ ಮಾಡುವಂತಿಲ್ಲ ಎಂಬಿತ್ಯಾದಿ ನಿಯಮಗಳಿವೆ. ಆದರೆ ಇದನ್ನು ನಯನ್ ದಂಪತಿ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ