ನಯನತಾರಾ-ವಿಘ್ನೇಶ್ ಬಾಡಿಗೆ ತಾಯ್ತನ ವಿವಾದ: ಆಸ್ಪತ್ರೆಗೇ ಸಂಕಷ್ಟ

ಗುರುವಾರ, 27 ಅಕ್ಟೋಬರ್ 2022 (09:20 IST)
ಚೆನ್ನೈ: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾಗಿರುವ ನಯನತಾರಾ-ವಿಘ‍್ನೇಶ್ ದಂಪತಿ ವಿರುದ್ಧ ತಮಿಳುನಾಡು ಸರ್ಕಾರ ಆದೇಶಿಸಿದ್ದ ತನಿಖೆ ಪೂರ್ಣಗೊಂಡಿದೆ.

ಕಾನೂನು ರೀತಿಯೇ ಮಕ್ಕಳನ್ನು ಪಡೆಯಲಾಗಿದೆಯೇ ಅಥವಾ ಏನಾದರೂ ಲೋಪಗಳಾಗಿತ್ತೇ ಎಂದು ತಿಳಿಯಲು ಸರ್ಕಾರ ತನಿಖೆಗೆ ಆದೇಶಿಸಿತ್ತು. ಅದರಂತೆ ತನಿಖೆ ಪೂರ್ಣವಾಗಿದ್ದು, ಮಗು ಪಡೆಯುವಾಗ ದಂಪತಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ವರದಿ ಸಲ್ಲಿಕೆಯಾಗಿದೆ.

ಆದರೆ ಬಾಡಿಗೆ ತಾಯಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ ಚಿಕಿತ್ಸೆ ನೀಡಿದ ಬಗ್ಗೆ ದಾಖಲೆ ಇಟ್ಟುಕೊಂಡಿಲ್ಲ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ