ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ನೇಹಾ ಪಾಟೀಲ್ ಅವರು ಪ್ರಣವ್ ಎಂಬ ಯುವಕನ ಜೊತೆ ಇದೇ ಅ. 19 ರಂದು ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಪ್ರಣವ್ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದು, ನೇಹಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರಣವ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಹಿರಿಯರ ನಿಶ್ಚಯದ ಮೇರೆಗೆ ನಟಿ ನೇಹಾ ಮದುವೆ ನಡೆಯಲಿದೆ.
ಹುಬ್ಬಳ್ಳಿ ಮೂಲದ ನೇಹಾ ಸಂಕ್ರಾಂತಿ, ಸಂಯುಕ್ತ, ಸಿತಾರಾ, ವರ್ಧನ, ಟೈಟ್ಲು ಬೇಕಾ, ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿರುವ ನೇಹಾ ಮದುವೆಯ ಬಳಿಕವೂ ಅಭಿನಯ ಮುಂದುವರಿಸಲು ನಿರ್ಧರಿಸಿದ್ದಾರೆ. ಅಭಿನಯಕ್ಕೆ ಪತಿ ಮನೆ ಕಡೆಯಿಂದ ಅಡ್ಡಿ ಇಲ್ಲದಿರೋದಾಗಿ ನೇಹಾ ಕುಟುಂಬ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.