ಬಿಗ್ ಬಾಸ್ ನಲ್ಲಿ ಸಿಗರೇಟು ಸೇವನೆ ಮಾಡೋದು ಸರೀನಾ?
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ಪದೇ ಪದೇ ಕೆಲವು ಸ್ಪರ್ಧಿಗಳು ಸಿಗರೇಟು ಸೇವನೆ ಮಾಡುವುದನ್ನು ತೋರಿಸುತ್ತಿದ್ದರೆ ಏನು ಮೌಲ್ಯ ಸಾರಿದಂತಾಯಿತು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕಳೆದೆರಡು ಸೀಸನ್ ಗಳಿಂದ ಬಿಗ್ ಬಾಸ್ ನಲ್ಲಿ ಸಿಗರೇಟು ಸೇವನೆ ಮಾಡುವ ಚಟವಿರುವವರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಇದಕ್ಕೆ ಕೆಲವರು ಆಕ್ಷೇಪವೆತ್ತಿದ್ದಾರೆ.