ಹೊಸ ವರ್ಷಕ್ಕೆ ಸಾಲು ಸಾಲು ಚಿತ್ರಗಳ ಹೊಸ ಪೋಸ್ಟರ್ ಬಿಡುಗಡೆ
ಬುಧವಾರ, 1 ಜನವರಿ 2020 (11:03 IST)
ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಹಲವು ಸ್ಯಾಂಡಲ್ ವುಡ್ ಚಿತ್ರಗಳ ಹೊಸ ಪೋಸ್ಟರ್, ಲುಕ್ ಬಿಡುಗಡೆಯಾಗಿದೆ. ಈ ಮೂಲಕ ಈ ವರ್ಷ ಹಲವು ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿರುವುದನ್ನು ಸೂಚಿಸಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಹೊಸ ಪೋಸ್ಟರ್ ಇಂದು ಬಹಿರಂಗವಾಗಿದೆ. ಇನ್ನು ನೆನಪಿರಲಿ ಖ್ಯಾತಿಯ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಕಳೆದ ವರ್ಷ ಸೆಟ್ಟೇರಿತ್ತು. ಅದರ ಹೊಸ ಲುಕ್ ಇಂದು ಲಾಂಚ್ ಆಗಿದೆ.
ಇದಲ್ಲದೆ, ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ‘100’ ಸಿನಿಮಾ, ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಸಲಗ’, ಧನಂಜಯ್ ನಾಯಕರಾಗಿರುವ ‘ಬಡವ ರಾಸ್ಕಲ್’ ಶ್ರೀನಗರ ಕಿಟ್ಟಿ ಅಭಿನಯದ ‘ಗರುಡ’ ಚಿತ್ರಗಳು ತಮ್ಮ ಹೊಸ ಪೋಸ್ಟರ್ ನ್ನು ಇಂದು ಲಾಂಚ್ ಮಾಡಿವೆ.