ತಮಿಳು ಹೀರೋನಿಂದ ಕಿರುಕುಳ ವರದಿ: ನಟಿ ನಿತ್ಯಾ ಮೆನನ್ ಹೇಳಿದ್ದೇನು?

ಬುಧವಾರ, 27 ಸೆಪ್ಟಂಬರ್ 2023 (09:00 IST)
ಚೆನ್ನೈ: ತನಗೆ ತಮಿಳು ಹೀರೋನಿಂದ ಕಿರುಕುಳವಾಗಿದೆ ಎಂದು ನಟಿ ನಿತ್ಯಾ ಮೆನನ್ ನೀಡಿದ್ದಾರೆಂಬ ಹೇಳಿಕೆ ಕೆಲವು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಅವರೇ ಈಗ ಸ್ಪಷ್ಟನೆ ನೀಡಿದ್ದಾರೆ.

‘ನನಗೆ ತೆಲುಗು ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ. ಆದರೆ ತಮಿಳಿನಲ್ಲಿ ತೊಂದರೆ ಅನುಭವಿಸಿದೆ. ತಮಿಳು ಹೀರೋ ನನಗೆ ಕಿರುಕುಳ ನೀಡಿದ್ದ’ ಎಂದು ಬಹುಭಾಷಾ ನಟಿ ನಿತ್ಯಾ ಮೆನನ್ ನೀಡಿದ್ದಾರೆಂಬ ಹೇಳಿಕೆ ವೈರಲ್ ಆಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿತ್ಯಾ ಮೆನನ್ ‘ಕೆಲವು ಮಾಧ್ಯಮಗಳು ಇಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ಖೇದದ ಸಂಗತಿ. ಇದು ಸುಳ್ಳು ಸುದ್ದಿ. ಇದಕ್ಕಿಂತ ಒಳ್ಳೆಯ ಸುದ್ದಿ ಹುಡುಕಿಕೊಳ್ಳಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ