ತ್ರಿಶಾ ಆಯ್ತು, ಇದೀಗ ಪೂಜಾ ಹೆಗ್ಡೆ ಮದುವೆ ಸುದ್ದಿ ವೈರಲ್

ಮಂಗಳವಾರ, 26 ಸೆಪ್ಟಂಬರ್ 2023 (09:10 IST)
ಹೈದರಾಬಾದ್: ಇತ್ತೀಚೆಗೆ ನಟಿಮಣಿಯರ ಮದುವೆ ಬಗ್ಗೆ ದಿನಕ್ಕೊಂದು ಗಾಸಿಪ್ ಗಳು ಹುಟ್ಟಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.

ಇದೀಗ ತೆಲುಗು ಸ್ಟಾರ್ ನಟಿ ಪೂಜಾ ಹೆಗ್ಡೆ ಮದುವೆ ಬಗ್ಗೆ ಸುದ್ದಿಗಳು ಓಡಾಡುತ್ತಿವೆ. ಸದ್ಯಕ್ಕೆ ಪೂಜಾಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿದೆ. ಇದೀಗ ಕರಾವಳಿ ಮೂಲದ ಚೆಲುವೆ ಖ್ಯಾತ ಕ್ರಿಕೆಟಿಗರೊಬ್ಬರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ನಟಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಲವು ದಿನಗಳ ಮೊದಲು ನಟಿ ತ್ರಿಶಾ ಕೃಷ್ಣನ್ ಮಲಯಾಳಂ ನಿರ್ಮಾಪಕರೊಬ್ಬರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಬಳಿಕ ತ್ರಿಶಾ ಅದನ್ನು ಅಲ್ಲಗಳೆದಿದ್ದರು. ಇದೀಗ ಪೂಜಾ ಹೆಗ್ಡೆ ಮದುವೆ ಬಗ್ಗೆ ಸುದ್ದಿ ಹಬ್ಬಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ