ಮಲಯಾಳಂ ನಿರ್ಮಾಪಕನ ಜೊತೆ ಮದುವೆ: ನಟಿ ತ್ರಿಶಾ ಟ್ವೀಟ್

ಶನಿವಾರ, 23 ಸೆಪ್ಟಂಬರ್ 2023 (08:40 IST)
ಚೆನ್ನೈ: ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಸದ್ಯದಲ್ಲೇ ಮಲಯಾಳಂ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಈ ಬಗ್ಗೆ ಇದೀಗ ಸ್ವತಃ ತ್ರಿಶಾ ಸ್ಪಷ್ಟನೆ ನೀಡಿದ್ದಾರೆ. ತ್ರಿಶಾ ಮಲಯಾಳಂನ ಖ್ಯಾತ ನಿರ್ಮಾಪಕರೊಬ್ಬರನ್ನು ವರಿಸಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಆ ನಿರ್ಮಾಪಕ ಯಾರಿರಬಹುದು ಎಂದು ಚರ್ಚೆಗಳೂ ಶುರುವಾಗಿದ್ದವು.

ಈ ನಡುವೆ ಟ್ವೀಟ್ ಮಾಡಿರುವ ತ್ರಿಶಾ ಇಂತಹ ಸುದ್ದಿಗಳನ್ನೆಲ್ಲಾ ನಂಬಬೇಡಿ, ಇದೆಲ್ಲಾ ರೂಮರ್ ಎಂದಿದ್ದಾರೆ. ಅಲ್ಲಿಗೆ ತ್ರಿಶಾ ಮದುವೆ ಗಾಸಿಪ್ ಗೆ ಬ್ರೇಕ್ ಬಿದ್ದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ