ಸರಿಲೇರು ನೀಕೆವ್ವರು ಸಿನಿಮಾ ಟೀಸರ್ ನಲ್ಲಿ ರಶ್ಮಿಕಾ ಮಂದಣ್ಣಗೆ ಶಾಕ್! ವೀಕ್ಷಕರಿಗೂ ಬೇಸರ!

ಶನಿವಾರ, 23 ನವೆಂಬರ್ 2019 (09:35 IST)
ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕರಾಗಿ ಅಭಿನಯಿಸುತ್ತಿರುವ ಸರಿಲೇರು ನೀಕೆವ್ವರು ಸಿನಿಮಾ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಆದರೆ ಟೀಸರ್ ನೋಡಿದ ರಶ್ಮಿಕಾ ಅಭಿಮಾನಿಗಳಿಗೆ ಶಾಕ್ ಆಗಿದೆ.


ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಟೀಸರ್ ಲಿಂಕ್ ಪ್ರಕಟಿಸಿದ್ದಾರೆ. ಆದರೆ ಟೀಸರ್ ನಲ್ಲಿ ರಶ್ಮಿಕಾ ಇಲ್ಲದಿರುವುದು ನೋಡಿ ವೀಕ್ಷಕರಿಗೆ ಶಾಕ್ ಆಗಿದೆ.

ಮಹೇಶ್ ಬಾಬು ಆಕ್ಷನ್ ದೃಶ್ಯಗಳು ಮತ್ತು ವಿಜಯ್ ಶಾಂತಿ ಮುಖ್ಯವಾಗಿ ಕಾಣಿಸಿಕೊಂಡಿರುವುದು ಬಿಟ್ಟರೆ ನಾಯಕಿ ರಶ್ಮಿಕಾರ ತುಣುಕು ದೃಶ್ಯವೂ ಇಲ್ಲ. ಇದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಶ್ಮಿಕಾ ಅಭಿಮಾನಿಗಳು ಟೀಸರ್ ನಮಗೆ ನಿಜಕ್ಕೂ ಬೇಸರ ತಂದಿದೆ. ನಿಮಗೆ ಯಾಕೆ ಚಿತ್ರತಂಡ ಇಂತಹ ಅನ್ಯಾಯ ಮಾಡಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ