ಶ್ರುತಿ ಹರಿಹರನ್-ಅರ್ಜುನ್ ಸರ್ಜಾ ಮೀ ಟೂ ಕೇಸ್ ಗೆ ಮರುಜೀವ

ಶುಕ್ರವಾರ, 9 ಜೂನ್ 2023 (16:09 IST)
ಬೆಂಗಳೂರು: ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ತನ್ನ ಮೇಲೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟಿ ಶ್ರುತಿ ಹರಿಹರನ್ ಮಾಡಿದ್ದ ಆರೋಪದ ಕೇಸ್ ಗೆ ಮರುಜೀವ ಬಂದಿದೆ.

ಈ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದರಿಂದ ಕೇಸ್ ಮುಕ್ತಾಯವಾಗಿತ್ತು. ಆದರೆ ಈ ಬಿ ರಿಪೋರ್ಟ್ ಒಪ್ಪದ ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದಾರೆ.

ಹೀಗಾಗಿ ಈಗ ನ್ಯಾಯಾಲಯ ಪೊಲೀಸರಿಗೆ ಸಾಕ್ಷ್ಯ ಒದಗಿಸುವಂತೆ ಶ್ರುತಿಗೆ ಸೂಚನೆ ನೀಡಿದೆ. ಒಂದು ವೇಳೆ ಶ್ರುತಿ ಮತ್ತೆ ಸಾಕ್ಷ್ಯ ನೀಡಲು ವಿಫಲರಾದರೆ ಕೇಸ್ ಬಿದ್ದುಹೋಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ