ರಾಧಿಕಾ ಜೊತೆ ಯಶ್ ಜೊತೆಗಿನ ಫೋಟೋ ನೋಡಿ ಫ್ಯಾನ್ಸ್ ಹೊಸ ಬೇಡಿಕೆ!

ಶುಕ್ರವಾರ, 9 ಜೂನ್ 2023 (07:20 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಪರೂಪಕ್ಕೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ಇದೀಗ ಪತ್ನಿ ರಾಧಿಕಾ ಪಂಡಿತ್ ಜೊತೆಗಿರುವ ರೊಮ್ಯಾಂಟಿಕ್ ಫೋಟೋವೊಂದನ್ನು ಯಶ್ ಹಂಚಿಕೊಂಡಿದ್ದಾರೆ.

ಅಭಿಷೇಕ್ ಅಂಬರೀಶ್ ಮದುವೆಗೆ ಸಿದ್ಧರಾಗಿದ್ದ ಡ್ರೆಸ್ ನಲ್ಲಿ ಯಶ್-ರಾಧಿಕಾ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಹಂಚಿಕೊಂಡ ಯಶ್ ‘ಹಾಗೇ ಸುಮ್ಮನೆ.. ಜೀವನ ಸುಂದರವಾಗಿದೆ’ ಎಂದು ಬರೆದುಕೊಂಡಿದ್ದರು.

ಯಶ್ ಫೋಟೋ ನೋಡಿ ಫ್ಯಾನ್ಸ್ ಹೊಸ ಬೇಡಿಕೆಯಿಟ್ಟಿದ್ದಾರೆ. ಕೆಜಿಎಫ್ 3 ಸಿನಿಮಾಗೆ ನೀವಿಬ್ಬರೇ ಜೋಡಿಯಾಗಿ ಎಂದಿದ್ದಾರೆ. ಮತ್ತೆ ಕೆಲವರು ಇನ್ನೊಂದು ಸಿನಿಮಾದಲ್ಲಿ ನಿಮ್ಮನ್ನು ಜೋಡಿಯಾಗಿ ನೋಡಬೇಕು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ