ಪಾಕ್‌ಗೆ ಭಾರತ ಮತ್ತೊಂದು ಜಲಾಘಾತ: ಸಿಂಧೂ ನದಿ ಆಯ್ತು, ಈಗ ಮತ್ತೆರಡು ಅಣೆಕಟ್ಟುಗಳ ನೀರಿಗೂ ಕತ್ತರಿ
ಈ ಹಿಂದೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದವು 1960 ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯನ್ನು ನಿಯಂತ್ರಿಸುತ್ತಿದೆ. ಬಾಗ್ಲಿಹಾರ್ ಅಣೆಕಟ್ಟು ಎರಡು ನೆರೆಹೊರೆಯವರ ನಡುವೆ ದೀರ್ಘಕಾಲದ ವಿವಾದದ ವಿಷಯವಾಗಿದೆ. ಪಾಕಿಸ್ತಾನ ಹಿಂದೆ ಇದೇ ವಿಚಾರವಾಗಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ಕೋರಿತ್ತು.