ಮಕ್ಕಳು ಹಾದಿ ತಪ್ಪಬಾರದು ಎಂದು ಪಾರ್ವತಮ್ಮ ರಾಜ್ ಕುಮಾರ್ ಮಾಡಿದ್ದ ರೂಲ್ಸ್

Krishnaveni K

ಮಂಗಳವಾರ, 11 ಜೂನ್ 2024 (09:34 IST)
ಬೆಂಗಳೂರು: ಒಂದು ಕಾಲದಲ್ಲಿ ಚಿತ್ರರಂಗಕ್ಕೆ ಅಮ್ಮನಂತಿದ್ದ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಮಕ್ಕಳು ಹಾದಿ ತಪ್ಪಬಾರದು ಎಂದು ತಮ್ಮದೇ ಕುಟುಂಬದೊಳಗೆ ಒಂದು ಕಂಡೀಷನ್ ಹಾಕಿದ್ದರು. ಆದರೆ ಯುವರಾಜ್ ಕುಮಾರ್ ವಿಚಾರದಲ್ಲಿ ತಪ್ಪಾಗಿದೆ.

ಡಾ. ರಾಜ್ ಕುಟುಂಬದಲ್ಲಿ ಹಿಂದಿನಿಂದಲೂ ಚಿತ್ರರಂಗಕ್ಕೆ ಬರುವ ಮೊದಲು ತಮ್ಮ ಮನೆಯ ಮಕ್ಕಳು ಮದುವೆಯಾಗಿಯೇ ಚಿತ್ರರಂಗಕ್ಕೆ ಬರಬೇಕು ಎಂದು ಪಾರ್ವತಮ್ಮ ರಾಜ್ ಕುಮಾರ್ ರೂಲ್ಸ್ ಮಾಡಿದ್ದರು. ಅದರಂತೇ ಶಿವರಾಜ್ ಕುಮಾರ್ ಅವರಿಂದ ಹಿಡಿದು ಪುನೀತ್, ರಾಘವೇಂದ್ರ ರಾಜ್ ಕುಮಾರ್ ಎಲ್ಲರೂ ಚಿತ್ರರಂಗಕ್ಕೆ ಬರುವಾಗ ಮದುವೆಯಾಗಿಯೇ ಬಂದಿದ್ದರು.

ರಾಜ್ ಕುಟುಂಬದಲ್ಲಿ ಇದುವರೆಗೆ ಪತಿ-ಪತ್ನಿ ನಡುವೆ ವೈಮನಸ್ಯ ಎನ್ನುವ ಸುದ್ದಿಯೇ ಕೇಳಿಬರುತ್ತಿರಲಿಲ್ಲ. ಇದಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಹಾಕಿಕೊಟ್ಟ ಹಾದಿಯೇ ಕಾರಣ ಎನ್ನಬಹುದು. ರಾಜ್ ಕುಟುಂಬ ಎಂದರೆ ಎಲ್ಲರಿಗೂ ಅಷ್ಟರಮಟ್ಟಿಗೆ ಮಾದರಿಯಾಗಿತ್ತು.

ಆದರೆ ಯುವರಾಜ್ ಕುಮಾರ್ ವಿಚಾರದಲ್ಲಿ ಇದು ತಪ್ಪಾಗಿ ಹೋಗಿದೆ. ಯುವ ಕೂಡಾ ಚಿತ್ರರಂಗಕ್ಕೆ ಬರುವ ಮೊದಲೇ ಮದುವೆಯಾಗಿದ್ದಾರೆ. ಈಗಷ್ಟೇ ಅವರ ಮೊದಲ ಸಿನಿಮಾ ಬಿಡುಗಡೆಯಾಗಿದೆ. ಆದರೆ ವಿಪರ್ಯಾಸವೆಂದರೆ ಇಷ್ಟೆಲ್ಲಾ ಆಗಿದ್ದರೂ ಒಂದು ಸಿನಿಮಾ ಬಿಡುಗಡೆಯಾಗುವಷ್ಟರಲ್ಲೇ ಯುವ ಸಂಸಾರದಲ್ಲಿ ಬಿರುಕು ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ