ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಗೆ ಈಗ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆಯಂತೆ. ಅವರಿಗೆ ಯಾವೆಲ್ಲಾ ಅನಾರೋಗ್ಯ ಕಾಡುತ್ತಿದೆ ನೋಡಿ.
ಸದಾ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾಗೆ ಈಗ ಜೈಲಿನ ವಾತಾವರಣ ಒಗ್ಗುತ್ತಿಲ್ಲ. ಮೆತ್ತನೆಯ ಮಂಚದ ಮೇಲೆ ಮಲಗುತ್ತಿದ್ದ ಪವಿತ್ರಾಗೆ ನೆಲದ ಮೇಲೆ ಮಲಗುವುದು ಕಷ್ಟವಾಗುತ್ತಿದೆ. ಚಿಕನ್, ಮಟನ್ ಎಂದು ರುಚಿ ರುಚಿಯಾದ ಆಹಾರ ಸೇವನೆ ಮಾಡುತ್ತಿದ್ದ ಪವಿತ್ರಾಗೆ ಜೈಲಿನ ಸಪ್ಪೆ ಊಟ ಮಾಡಲಾಗುತ್ತಿಲ್ಲ.
ಹೀಗಾಗಿ ಅಜೀರ್ಣ ಸಮಸ್ಯೆ ಕಾಡುತ್ತಿದೆಯಂತೆ. ಸರಿಯಾಗಿ ಊಟ ಸೇರದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿದೆಯಂತೆ. ಇದಕ್ಕಾಗಿ ಮನೆಯವರು ಭೇಟಿಯಾದಾಗಲೆಲ್ಲಾ ಹಣ್ಣು-ಹಂಪಲುಗಳನ್ನು ತಂದು ಕೊಡುತ್ತಿದ್ದಾರೆ. ಇನ್ನು ಎಸಿ ರೂಂನಲ್ಲಿ ಮಲಗುತ್ತಿದ್ದವರಿಗೆ ಈಗ ಸೊಳ್ಳೆ ಕಡಿಸಿಕೊಂಡು ರಾತ್ರಿಯೆಲ್ಲಾ ನಿದ್ರೆಯಿಲ್ಲದೇ ಲೋ ಬಿಪಿ ಕಾಡುತ್ತಿದೆಯಂತೆ.
ಅವರ ಅನಾರೋಗ್ಯಕ್ಕೆ ಸದ್ಯಕ್ಕೆ ಜೈಲಿನಲ್ಲಿರುವ ವೈದ್ಯರಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ. ಪವಿತ್ರಾ ಪರ ಅವರ ಕುಟುಂಬಸ್ಥರು ಮನೆ ಊಟಕ್ಕೆ ಕೋರ್ಟ್ ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವಾಗಲೂ ಪವಿತ್ರಾ ಒಮ್ಮೆ ಲೋ ಬಿಪಿ ಸಮಸ್ಯೆಗೊಳಗಾಗಿದ್ದರು.