ಬೆಂಗಳೂರು: ನಟ ದರ್ಶನ್ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಸಿನಿಮಾ ರಂಗದ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಅವರೊಂದಿಗಿನ ಫೋಟೋ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ.
ನಟಿ ರಕ್ಷಿತಾ ಪ್ರೇಮ್, ಬಿಗ್‌ಬಾಸ್ ಸ್ಪರ್ಧಿ ಅನುಷಾ ರೈ, ನಟ ಧನ್ವೀರ್, ನಿರ್ದೇಶಕ ತರುಣ್ ಸುಧೀರ್, ಸಹೋದರ ದಿನಕರ ತೂಗುದೀಪ್ ಅವರು ಬರ್ತಡೇ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಇನ್ನು ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ್ದಾಗಿನಿಂದ ರಿಲೀಸ್ ಆಗಿ ಹೊರ ಬಂದ್ಮೇಲೂ ಅವರು ಬಲಗೈಯಾಗಿರುವ ಧನ್ವೀರ್ ಅವರು ದರ್ಶನ್‌ರೊಂದಿಗಿನ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.
ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ, ಹುಟ್ಟುಹಬ್ಬದ ಶುಭಾಶಯಗಳು ಅಣ್ಣ(ಬಾಸ್) #ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ದಿನಕರ್ ತೂಗುದೀಪ್ ಅವರು ಹುಟ್ಟು ಹಬ್ಬದ ಶುಭಾಶಯಗಳು ಸಾರಥಿ ಎಂದು ಹಾರೈಸಿದ್ದಾರೆ.