ಪವನ್ ಕಲ್ಯಾಣ್ ಸ್ಟೈಲಿಷ್ ಲುಕ್ ನೋಡಿ ಆಶ್ವರ್ಯ ಚಕಿತರಾದ ಅಭಿಮಾನಿಗಳು

ಸೋಮವಾರ, 15 ಮಾರ್ಚ್ 2021 (10:25 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಕ್ರಿಶ್ ನಿರ್ದೇಶನದ ಚಿತ್ರದಲ್ಲಿ  ಕೆಲಸಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಪವನ್ ಸಖತ್ ವರ್ಕ್ ಔಟ್ ಮಾಡುತ್ತಿದ್ದಾರೆ.

ಹಾಗಾಗಿ ಇದೀಗ ಪವನ್ ಕಲ್ಯಾಣ್ ಅವರ ಸ್ಲಿಮ್ ಆಗಿರುವ ಪೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಪವನ್ ಕಲ್ಯಾಣ್ ಕಪ್ಪು ಟಿ ಶರ್ಟ್ ಹಾಗೂ ಗಾಢ ನೀಲಿ ಬಣ‍್ಣದ ಪ್ಯಾಂಟ್ ಧರಿಸಿ ಕ್ಲೀನ್ ಸೇವ್ ಮಾಡಿ ಸಖತ್  ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಅವರ ಈ ಸ್ಟೈಲಿಷ್ ಲುಕ್ ನೋಡಿ ಅಭಿಮಾನಿಗಳು ಆಶ್ವರ್ಯ ಚಕಿತರಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ