ಕಿಚ್ಚ ಸುದೀಪ್ ಮನೆಗೆ ಕಮಿಷನರ್ ಭಾಸ್ಕರ್ ರಾವ್ ಭೇಟಿ

ಶುಕ್ರವಾರ, 20 ಸೆಪ್ಟಂಬರ್ 2019 (16:58 IST)
ಬೆಂಗಳೂರು: ಕಿಚ್ಚ ಸುದೀಪ್ ಮನೆಗೆ ಸಿಟಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.


ದಿಡೀರ್ ಆಗಿ ಬೆಳಿಗ್ಗೆಯಿಂದ ಕಿಚ್ಚನ ಮನೆಯಲ್ಲಿ ಪೊಲೀಸರ ಓಡಾಟ ನಡೆಸಿ ಹಲವು ಅನುಮಾನ ಉಂಟಾಗಿತ್ತು. ಬಳಿಕ ಕಿಚ್ಚ ಕೆಲವೇ ಕ್ಷಣಗಳಲ್ಲಿ ಭಾಸ್ಕರ್ ರಾವ್ ಜತೆಗಿರುವ ಫೋಟೋ ಪ್ರಕಟಿಸಿ, ನಿಮ್ಮನ್ನು ಭೇಟಿಯಾಗಿದ್ದು ಖುಷಿಯಾಗಿದೆ ಎಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹೀಗಾಗಿ ಕಿಚ್ಚನ ಮನೆಗೆ ಭಾಸ್ಕರ್ ರಾವ್ ಭೇಟಿ ಮಾಡಿದ್ದೇಕೆ ಎಂಬ ಬಗ್ಗೆ ಮತ್ತಷ್ಟು ಪ್ರಶ್ನೆಗಳೆದ್ದಿವೆ. ಅದರಲ್ಲೂ ವಿಶೇಷವಾಗಿ ಪೈಲ್ವಾನ್ ಸಿನಿಮಾ ಪೈರಸಿ ವಿವಾದದ ನಡುವೇ ಭಾಸ್ಕರ್ ರಾವ್ ಭೇಟಿ ಇನ್ನಷ್ಟು ಕುತೂಹಲ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ