ಬೆಂಗಳೂರು: ಸಿನಿಮಾಗಳಲ್ಲಿ ಲಾಂಗು, ಮಚ್ಚು ಹಿಡಿದು ರೌಡಿಸಂ ವೈಭವೀಕರಿಸುವ ದೃಶ್ಯಗಳಿಗೆ ಇನ್ನು ಮುಂದೆ ಕತ್ತರಿ ಬೀಳುವ ಸಾಧ್ಯತೆಯಿದೆ.
ಇಂತಹ ದೃಶ್ಯಗಳಿಗೆ ನಿಯಂತ್ರಣ ಹೇರಲು ರಾಜ್ಯ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ರೌಡಿಸಂ ಆಧಾರಿತ ಕತೆಗಳು, ಪ್ರೇರೇಪಿಸುವ ದೃಶ್ಯಗಳಿಂದ ದುಷ್ಪರಿಣಾಮವಾಗುತ್ತದೆ ಎನ್ನುವ ಕಾರಣಕ್ಕೆ ಪೊಲೀಸ್ ಇಲಾಖೆ ಈ ಚಿಂತನೆ ನಡೆಸಿದೆ.
ರೌಡಿಸಂ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದಕ್ಕೆ ಕೆಲವು ಸಿನಿಮಾ ದೃಶ್ಯಗಳೂ ಪ್ರೇರೇಪಣೆಯಾಗುತ್ತಿವೆ ಎಂಬ ಆರೋಪಗಳಿವೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಅಪರಾಧ ಕೃತ್ಯಗಳನ್ನು ಪ್ರಚೋದಿಸುವ ದೃಶ್ಯಗಳಿಗೆ ನಿಯಂತ್ರಣ ಹೇರಲು ಮುಂದಾಗಿದೆ.