Shobhitha Shivanna: ಕನ್ನಡದ ನಟಿ ಶೋಭಿತಾ ಶಿವಣ್ಣ ನೇಣಿಗೆ ಶರಣು: ಪೊಲೀಸರಿಗಿದೆ ಅನುಮಾನ

Krishnaveni K

ಸೋಮವಾರ, 2 ಡಿಸೆಂಬರ್ 2024 (11:07 IST)
Photo Credit: X
ಹೈದರಾಬಾದ್: ಕನ್ನಡ ಮೂಲದ ಕಿರುತೆರೆ ನಟಿ ಶೋಭಿತಾ ಶಿವಣ್ಣ ಹೈದರಾಬಾದ್ ನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ.

ಶೋಭಿತಾ ಶಿವಣ್ಣ ಶನಿವಾರವಷ್ಟೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಮಾಮೂಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ಭಾನುವಾರ ತಡರಾತ್ರಿ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿ ಕಷ್ಟಪಟ್ಟು ನಟಿಯಾಗಿ ತಮ್ಮದೇ ಹೆಸರು ಮಾಡಿದ್ದ ಶೋಭಿತಾ ಗಟ್ಟಿಗಿತ್ತಿ. ಆದರೆ ಈ ರೀತಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂದು ಎಲ್ಲರೂ ಅಚ್ಚರಿಪಡುವಂತಾಗಿದೆ.

ಹೈದರಾಬಾದ್ ಮೂಲದ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವ್ಯಕ್ತಪಯನ್ನು ಎರಡು ವರ್ಷದ ಹಿಂದಷ್ಟೇ ಶೋಭಿತಾ ಮದುವೆಯಾಗಿದ್ದರು. ಅದಾದ ಬಳಿಕ ಅವರು ಬಣ್ಣದ ಬದುಕಿನಿಂದ ದೂರವೇ ಇದ್ದರು. ಅವರ ಸಾವಿನ ನಿಖರ ಕಾರಣವೇನೆಂದು ಯಾರಿಗೂ ಗೊತ್ತಿಲ್ಲ.

ತಮ್ಮ ಜೀವನದ ಸಮಸ್ಯೆ ಬಗ್ಗೆಯೂ ಯಾರಿಗೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಕೌಟುಂಬಿಕವಾಗಿ ಯಾರಿಗೂ ಹೇಳಲಾಗದ ಸಮಸ್ಯೆಯಿತ್ತೇ ಎಂಬ ಅನುಮಾನಗಳಿವೆ. ಈ ಸಂಬಂಧ ಪೊಲೀಸರು ಈಗ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಆಕೆಯ ಮರಣೋತ್ತರ ಪರೀಕ್ಷಾ ವರದಿ ಬರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ