ನಟ ಸೂರ್ಯ ಮುಂದಿನ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಪೂಜಾ ಹೆಗ್ಡೆ
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ನಿರ್ದೇಶಕರು ಹೀಗೆ ಬರೆದಿದ್ದಾರೆ, "#Suriya44 ಗಾಗಿ @hegdepooja ಸ್ವಾಗತಿಸಲು ಸಂತೋಷವಾಗಿದೆ. #PoojaHegde #LoveLaughterWar #AKarthikSubbarajPadam ಆನ್‌ಬೋರ್ಡ್‌ಗೆ ಸ್ವಾಗತ." ಎಂದು ಬರೆದುಕೊಂಡಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ಸೂರ್ಯ 44' ಚಿತ್ರವು 'ಪ್ರೀತಿ, ನಗು, ಯುದ್ಧ' ಎಂಬ ಅಡಿಬರಹದೊಂದಿಗೆ ಚಿತ್ರ ಕಥೆಯನ್ನು ಹೆಣೆಯಲಾಗಿದೆ. ಚಿತ್ರಕ್ಕೆ ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ಸಂತೋಷ್ ನಾರಾಯಣನ್ ಸಂಗೀತ ನೀಡಲಿದ್ದಾರೆ.