ನಾಗ ಅಶ್ವಿನ್ –ಪ್ರಭಾಸ್ ಬಹು ಬಜೆಟ್ ಚಿತ್ರದ ಚಿತ್ರೀಕರಣ ಮುಂದೂಡಿಕೆ
ಗುರುವಾರ, 29 ಏಪ್ರಿಲ್ 2021 (11:10 IST)
ಹೈದರಾಬಾದ್ : ಕೊರೊನಾ ವೈರಸ್ 2ನೇ ಅಲೆ ದೇಶದಲ್ಲಿ ಭಾರೀ ಕೋಲಾಹಲ ಸೃಷ್ಟಿಸುತ್ತಿದೆ. ಹಾಗಾಗಿ ಹಲವಾರು ಸಿನಿಮಾಗಳನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಅದರಲ್ಲಿ ನಾಗ್ ಅಶ್ವಿನ್ ಅವರ ಚಿತ್ರ ಕೂಡ ಒಂದು.
ನಾಗ ಅಶ್ವಿನ್ ಅವರ ಬಿಗ್ ಬಜೆಟ್ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಇದರ ಚಿತ್ರೀಕರಣ ಜೂನ್ ನಲ್ಲಿ ಪ್ರಾರಂಭವಾಗಬೇಕಾಗಿತ್ತು. ಆದರೆ ಈಗ ಚಿತ್ರೀಕರಣ ಮುಂದೂಡಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ದೀಪಾವಳಿಯ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮ ನಡೆಸುವುದರ ಮೂಲಕ ಪ್ರಭಾಸ್ ಅವರ ಮುಂಬರುವ ಹೆಸರಿಸಿದ ಚಿತ್ರದ ಪ್ರಾಜೆಕ್ಟ್ ಪ್ರಾರಂಭವಾಗಲಿದೆ. ಅದರ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.