ಆಕ್ಟ್ 1978 ಚಿತ್ರಕ್ಕೆ ಪವರ್ ಸ್ಟಾರ್ ಸಾಥ್: ಕುತೂಹಲ ಹೆಚ್ಚಿಸಿದ ಮಂಸೋರೆ ಚಿತ್ರದ ಟ್ರೈಲರ್

ಮಂಗಳವಾರ, 3 ನವೆಂಬರ್ 2020 (12:53 IST)
ಬೆಂಗಳೂರು: ಹರಿವು, ನಾತಿಚರಾಮಿ ಸಿನಿಮಾ ಮೂಲಕ ಚಂದನವನದಲ್ಲಿ ಸಂಚಲನ ಸೃಷ್ಟಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೂರೆ ‘ಆಕ್ಟ್ 1978’ ಚಿತ್ರದ ಮೂಲಕಪ್ರೇಕ್ಷಕರಎದುರು ಬರುತ್ತಿದ್ದಾರೆ. ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಮೂಲಕ ಕುತೂಹಲವನ್ನುಹುಟ್ಟುಹಾಕಿರುವ ಚಿತ್ರ ಟ್ರೈಲರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಆಕ್ಟ್ 1978’ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಪಿಆರ್ಕೆ ಆಡಿಯೋನಲ್ಲಿ ‘ಆಕ್ಟ್1978’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಸರ್ಕಾರ, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಸಾಮಾನ್ಯ ಜನರು ದನಿ ಎತ್ತುವ,ಹೋರಾಟಕ್ಕಿಳಿಯುವ ಕಥಾ ವಸ್ತು ಚಿತ್ರದಲ್ಲಿದ್ದು ಟ್ರೈಲರ್ ಸಿನಿ ಪ್ರೇಮಿಗಳಲಿದ್ದ ಕೌತುಕತೆಯನ್ನು ದುಪ್ಪಟ್ಟು ಮಾಡಿದೆ. ಚಿತ್ರದಲ್ಲಿ ಯಜ್ಞಾ ಶೆಟ್ಟಿ ಪಾತ್ರ ಕುತೂಹಲ ಕೆರಳಿಸಿದ್ದು ಒಟ್ಟಿನಲ್ಲಿ ‘ಆಕ್ಟ್ 1978’ ಹೊಸ ಸಂಚಲನ ಸೃಷ್ಟಿಸೋದು ಪಕ್ಕಾ ಅಂತಿದ್ದಾರೆ ಪ್ರೇಕ್ಷಕ ಪ್ರಭುಗಳು.
ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್,ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ದತ್ತಣ್ಣ, ಸಂಚಾರಿ ವಿಜಯ್,ಶರಣ್ಯ, ಶ್ರುತಿ, ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸೆನ್ಸಾರ್ ನಿಂದ ಯು ಸರ್ಟಿಫಿಕೇಟ್ ಪಡೆದಿರೋ ಈ ಚಿತ್ರಕ್ಕೆ ದೇವರಾಜ್ .ಆರ್ ಬಂಡವಾಳ ಹೂಡಿದ್ದಾರೆ.
ಚಿತ್ರಕ್ಕೆ ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನ, ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಈ ಹಿಂದೆ ಚಿತ್ರದ ಥೀಮ್ ಸಾಂಗ್ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ರು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಆಕ್ಟ್ 1978’ಚಿತ್ರಕ್ಕೆ ಸಾಥ್ ನೀಡಿದ್ದು ಚಿತ್ರಕ್ಕೆ ಹೊಸ ಪವರ್ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ