ವಿಶೇಷ ದಿನದಂದೇ ಆದಿಪುರುಷ್ ಪ್ರಚಾರ ಶುರು ಮಾಡಲಿದ್ದಾರೆ ಪ್ರಭಾಸ್

ಮಂಗಳವಾರ, 21 ಮಾರ್ಚ್ 2023 (11:15 IST)
Photo Courtesy: Twitter
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಐತಿಹಾಸಿಕ ಸಿನಿಮಾ ಆದಿಪುರುಷ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

ವಿಎಫ್ ಎಕ್ಸ್ ಎಡವಟ್ಟಿನಿಂದಾಗಿ ಟೀಸರ್ ಟ್ರೋಲ್ ಗೊಳಗಾಗಿದ್ದರೂ ಪ್ರಭಾಸ್ ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಬಗ್ಗೆ ಕುತೂಹಲವಿದೆ.

ಈ ಬಹುನಿರೀಕ್ಷಿತ ಸಿನಿಮಾ ಜೂನ್ 16 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ. ಬಹುತಾರಾಗಣವಿರುವ ಸಿನಿಮಾದ ಪ್ರಚಾರ ಕಾರ್ಯವನ್ನು ಚಿತ್ರತಂಡ ರಾಮನವಮಿ ದಿನವೇ ಆರಂಭಿಸಲು ತೀರ್ಮಾನಿಸಿದೆ. ಮಾರ್ಚ್ 30 ರಂದು ರಾಮನವಮಿ ಇದ್ದು ಆ ದಿನದಂದೇ ವಿವಿಧ ಭಾಷೆಗಳಲ್ಲಿ ಪ್ರಚಾರ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ